IRIDO Recruitment – 6300 ಚಾಲಕ ಮತ್ತು MTS ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸರ್ಕಾರಿ ಕೆಲಸ ಅವಕಾಶ
ನಮಸ್ಕಾರ ಸ್ನೇಹಿತರೇ, Janasevainfo.com ಗೆ ಸ್ವಾಗತ. ಸರ್ಕಾರಿ ಕೆಲಸ ಹುಡುಕ್ತಾ ಇದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿಯೇ ಇದೆ!
ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಅಂದ್ರೆ IRIDO ಈ ಸಲ ಬರೋಬ್ಬರಿ 6300 ಹುದ್ದೆಗಳಿಗೆ ನೇಮಕಾತಿ ಮಾಡ್ತಾ ಇದೆ. ಇದ್ರಲ್ಲಿ ಚಾಲಕ, MTS (Multi-Tasking Staff), ಜಿಲ್ಲಾ ಮ್ಯಾನೇಜರ್, ಕ್ಲರ್ಕ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ತರಹೇವಾರಿ ಪೋಸ್ಟ್‌ಗಳಿವೆ.
8ನೇ ತರಗತಿ ಪಾಸ್ ಆದವ್ರಿಂದ ಹಿಡಿದು ಪೋಸ್ಟ್ ಗ್ರಾಜುಯೇಟ್ ಆದವ್ರೆಗೂ ಅರ್ಜಿ ಹಾಕಬಹುದು. ಅಖಿಲ ಭಾರತ ಮಟ್ಟದಲ್ಲಿ ನೇಮಕಾತಿ ನಡಿತಿರೋದ್ರಿಂದ ಕರ್ನಾಟಕದ ಅಭ್ಯರ್ಥಿಗಳಿಗೂ ಒಳ್ಳೆ ಅವಕಾಶ ಇದೆ.
ಅರ್ಜಿ ಸಲ್ಲಿಸುವ ಕೊನೆ ದಿನಾಂಕ 31 ಮೇ 2026. ಅಂದ್ರೆ ಟೈಮ್ ಕಡಿಮೆ ಇದೆ, ಈಗಲೇ ತಯಾರಿ ಶುರು ಮಾಡಿ. ಈ ಆರ್ಟಿಕಲ್‌ನಲ್ಲಿ ಅರ್ಹತೆ, ಸಂಬಳ, ಅರ್ಜಿ ಪ್ರಕ್ರಿಯೆ, ತಯಾರಿ ಟಿಪ್ಸ್ ಎಲ್ಲಾನೂ ವಿವರವಾಗಿ ಕೊಡ್ತೀವಿ. ಓದ್ತಾ ಇರಿ
ಇದನ್ನು ಓದಿ:-ಭರ್ಜರಿ ಅವಕಾಶ Mysuru District Court Recruitment 2026: 93 ಹುದ್ದೆಗಳು ಈಗಲೇ Apply ಮಾಡಿ, ವೇತನ ₹83,700 ವರೆಗೆ
IRIDO Recruitment Job Reality Check (Very Important)
ಇಲ್ಲಿ ಒಂದು ಮಾತು ಸ್ಪಷ್ಟವಾಗಿ ಹೇಳಬೇಕು — IRIDO ಅಂದ್ರೆ Indian Rural Industrial Development Organisation. ಇದು ಒಂದು ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆ, ಆದ್ರೆ ನೇರ ಕೇಂದ್ರ ಸರ್ಕಾರದ ಇಲಾಖೆ ಅಲ್ಲ.
ನೀವು ತಿಳಿದುಕೊಳ್ಳಬೇಕಾದ ವಿಷಯಗಳು:
- ಇದು ಅಧಿಕೃತ ಅಧಿಸೂಚನೆ ಮೂಲಕ ನೇಮಕಾತಿ ಮಾಡ್ತಾ ಇದೆ
- ಸಂಬಳ ಸರ್ಕಾರಿ ಮಾನದಂಡದಂತೆ ನಿಗದಿ ಮಾಡಲಾಗಿದೆ
- ಆಯ್ಕೆ ಪ್ರಕ್ರಿಯೆ ಸಂದರ್ಶನ ಮೂಲಕ ನಡಿತ್ತೆ
- ಅರ್ಜಿ ಸಲ್ಲಿಸೋಕ್ಕೆ ಮೊದ್ಲು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಟಿಫಿಕೇಶನ್ ಓದಿ
- ಯಾವುದೇ ಏಜೆಂಟ್‌ಗೆ ಹಣ ಕೊಡಬೇಡಿ — ಆನ್‌ಲೈನ್‌ನಲ್ಲಿ ನೀವೇ ಅರ್ಜಿ ಹಾಕಬಹುದು
- Fake ವೆಬ್‌ಸೈಟ್‌ಗಳಿಂದ ಎಚ್ಚರ — ಅಧಿಕೃತ ಲಿಂಕ್ ಮಾತ್ರ ಬಳಸಿ
ಇದು ನಿಜವಾದ ನೇಮಕಾತಿ, ಆದ್ರೆ ಎಲ್ಲಾ ವಿವರಗಳನ್ನ ಒಮ್ಮೆ ಅಧಿಕೃತ ನೋಟಿಫಿಕೇಶನ್‌ನಲ್ಲಿ ಕನ್‌ಫರ್ಮ್ ಮಾಡ್ಕೊಳ್ಳಿ.
IRIDO Recruitment ಅವಲೋಕನ
| ವಿವರ | ಮಾಹಿತಿ |
| ಸಂಸ್ಥೆಯ ಹೆಸರು | ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (IRIDO) |
| ಒಟ್ಟು ಹುದ್ದೆಗಳು | 6300 |
| ಪೋಸ್ಟ್ ಹೆಸರುಗಳು | ಚಾಲಕ, MTS, ಕ್ಲರ್ಕ್, ಮ್ಯಾನೇಜರ್ ಇತರೆ |
| ಕೆಲಸದ ಸ್ಥಳ | ಅಖಿಲ ಭಾರತ |
| ಅರ್ಜಿ ವಿಧಾನ | ಆನ್‌ಲೈನ್ |
| ಅರ್ಜಿ ಪ್ರಾರಂಭ | 01 ಮೇ 2026 |
| ಅರ್ಜಿ ಕೊನೆ ದಿನ | 31 ಮೇ 2026 |
| ಸಂಬಳ | ₹18,000 – ₹2,15,900/- ತಿಂಗಳು |
| ಆಯ್ಕೆ ಪ್ರಕ್ರಿಯೆ | ಸಂದರ್ಶನ |
| ವಯಸ್ಸಿನ ಮಿತಿ | 18 – 45 ವರ್ಷ |
| ಅರ್ಹತೆ | 8ನೇ / 10ನೇ / 12ನೇ / ITI / ಡಿಪ್ಲೊಮಾ / ಪದವಿ / PG |
IRIDO Recruitment ಹುದ್ದೆಗಳ ಸಂಪೂರ್ಣ ವಿವರ
ಇಲ್ಲಿ 24 ಬೇರೆ ಬೇರೆ ಪೋಸ್ಟ್‌ಗಳಿವೆ. ಪ್ರತಿ ಪೋಸ್ಟ್ ವಿವರ ನೋಡಿ:
| ಪೋಸ್ಟ್ ಹೆಸರು | ಹುದ್ದೆಗಳ ಸಂಖ್ಯೆ | ವಯಸ್ಸಿನ ಮಿತಿ |
| ಯೋಜನಾ ವ್ಯವಸ್ಥಾಪಕ | 56 | 30–45 ವರ್ಷ |
| ಪ್ರಾದೇಶಿಕ ವ್ಯವಸ್ಥಾಪಕ | 85 | 30–45 ವರ್ಷ |
| ಮಾರ್ಕೆಟಿಂಗ್ ವ್ಯವಸ್ಥಾಪಕ | 104 | 25–40 ವರ್ಷ |
| ಕಾರ್ಯನಿರ್ವಾಹಕ ವ್ಯವಸ್ಥಾಪಕ | 259 | 25–40 ವರ್ಷ |
| ವಿಭಾಗೀಯ ವ್ಯವಸ್ಥಾಪಕ | 311 | 25–40 ವರ್ಷ |
| ಜಿಲ್ಲಾ ವ್ಯವಸ್ಥಾಪಕ | 611 | 18–40 ವರ್ಷ |
| ತಹಸಿಲ್ ವ್ಯವಸ್ಥಾಪಕ | 880 | 18–40 ವರ್ಷ |
| ಶಾಖಾ ವ್ಯವಸ್ಥಾಪಕ | 273 | 18–40 ವರ್ಷ |
| ಸಹಾಯಕ ಶಾಖಾ ವ್ಯವಸ್ಥಾಪಕ | 273 | 18–40 ವರ್ಷ |
| ಲೆಕ್ಕಾಧಿಕಾರಿ | 156 | 18–40 ವರ್ಷ |
| ಗುಮಾಸ್ತ (Clerk) | 114 | 18–40 ವರ್ಷ |
| ಕಂಪ್ಯೂಟರ್ ಆಪರೇಟರ್ | 225 | 18–40 ವರ್ಷ |
| ತಂಡ ನಾಯಕ | 489 | 18–40 ವರ್ಷ |
| ಕ್ಷೇತ್ರ ಅಧಿಕಾರಿ | 249 | 18–40 ವರ್ಷ |
| ತರಬೇತಿ ಅಧಿಕಾರಿ | 123 | 18–40 ವರ್ಷ |
| ಅಪ್ರೆಂಟಿಸ್ | 754 | 18–40 ವರ್ಷ |
| ಸ್ಟೋರ್ ಮೇಲ್ವಿಚಾರಕ | 145 | 18–40 ವರ್ಷ |
| ಲ್ಯಾಬ್ ಅಟೆಂಡೆಂಟ್ | 143 | 18–40 ವರ್ಷ |
| ಸಹಾಯಕ | 280 | 18–40 ವರ್ಷ |
| ಚಾಲಕ | 90 | 18–40 ವರ್ಷ |
| ಪಿಯೂನ್ | 78 | 18–40 ವರ್ಷ |
| ಗಾರ್ಡ್ | 208 | 18–40 ವರ್ಷ |
| MTS | 234 | 18–40 ವರ್ಷ |
| ಎಲೆಕ್ಟ್ರಿಷಿಯನ್ | 160 | 18–40 ವರ್ಷ |
ಒಟ್ಟು: 6300 ಹುದ್ದೆಗಳು
ಇದನ್ನು ಓದಿ:-Breaking: BEML Recruitment 2026 – 10 ಸಹಾಯಕ ಎಂಜಿನಿಯರ್ ಹುದ್ದೆಗಳು | Golden Chance ಸರ್ಕಾರಿ ಉದ್ಯೋಗ
IRIDO ಹುದ್ದೆಗೆ ಯಾರು ಅರ್ಜಿ ಹಾಕಬೇಕು?
ಈ ನೇಮಕಾತಿ ಎಲ್ಲಾ ವರ್ಗದ ಜನರಿಗೂ ಅವಕಾಶ ಕೊಡ್ತಾ ಇದೆ. ನಿಮ್ಮ ಪ್ರೊಫೈಲ್‌ನ್ನ ಈ ಲಿಸ್ಟ್‌ನಲ್ಲಿ ಚೆಕ್ ಮಾಡ್ಕೊಳ್ಳಿ:
ಇವರು ಖಂಡಿತ ಅರ್ಜಿ ಹಾಕಬೇಕು:
- 8ನೇ ತರಗತಿ ಮಾತ್ರ ಓದಿದ್ದರೂ ಅರ್ಜಿ ಹಾಕಬಹುದು (ಸಹಾಯಕ, ಚಾಲಕ, ಪಿಯೂನ್, ಗಾರ್ಡ್ ಪೋಸ್ಟ್‌ಗೆ)
- SSLC / PUC ಮುಗಿಸಿದ ಯುವ ಹುಡುಗ/ಹುಡುಗಿಯರು
- ITI ಅಥವಾ ಡಿಪ್ಲೊಮಾ ಮಾಡಿದ ಟೆಕ್ನಿಕಲ್ ಸ್ಟೂಡೆಂಟ್ಸ್
- ಗ್ರಾಜುಯೇಟ್ / ಪೋಸ್ಟ್ ಗ್ರಾಜುಯೇಟ್ ಆದ ಅಭ್ಯರ್ಥಿಗಳು
- ಡ್ರೈವಿಂಗ್ ಲೈಸೆನ್ಸ್ ಇರೋ ಯಾರಾದ್ರೂ (ಚಾಲಕ ಪೋಸ್ಟ್‌ಗೆ)
- ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು
- SC / ST / OBC / EWS ವರ್ಗದ ಅಭ್ಯರ್ಥಿಗಳು (ಶುಲ್ಕ ರಿಯಾಯಿತಿ ಇದೆ)
- 18ರಿಂದ 45 ವರ್ಷ ಒಳಗಿನ ಎಲ್ಲರೂ
ಇವರು ಅರ್ಜಿ ಹಾಕಬಾರದು:
- 45 ವರ್ಷ ದಾಟಿದವರು (ರಿಲ್ಯಾಕ್ಸೇಶನ್ ಬಿಟ್ಟು)
- ಅಧಿಕೃತ ನೋಟಿಫಿಕೇಶನ್ ಓದದೆ ಅರ್ಜಿ ಹಾಕೋರು
IRIDO Recruitment ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ
| ಪೋಸ್ಟ್ | ಬೇಕಾದ ವಿದ್ಯಾರ್ಹತೆ |
| ಯೋಜನಾ ವ್ಯವಸ್ಥಾಪಕ | ಸ್ನಾತಕೋತ್ತರ ಪದವಿ (PG) |
| ಪ್ರಾದೇಶಿಕ, ಮಾರ್ಕೆಟಿಂಗ್, ಕಾರ್ಯನಿರ್ವಾಹಕ, ವಿಭಾಗೀಯ, ಜಿಲ್ಲಾ ಮ್ಯಾನೇಜರ್ | ಪದವಿ (Degree) |
| ಲೆಕ್ಕಾಧಿಕಾರಿ | ಪದವಿ |
| ತಹಸಿಲ್ ಮ್ಯಾನೇಜರ್, ಶಾಖಾ ಮ್ಯಾನೇಜರ್, ಸಹಾಯಕ ಶಾಖಾ ಮ್ಯಾನೇಜರ್ | 12ನೇ |
| ಗುಮಾಸ್ತ, ತಂಡ ನಾಯಕ, ಲ್ಯಾಬ್ ಅಟೆಂಡೆಂಟ್ | 12ನೇ |
| ಕಂಪ್ಯೂಟರ್ ಆಪರೇಟರ್ | 12ನೇ + ಡಿಪ್ಲೊಮಾ |
| ಕ್ಷೇತ್ರ ಅಧಿಕಾರಿ, ತರಬೇತಿ ಅಧಿಕಾರಿ, ಅಪ್ರೆಂಟಿಸ್, ಸ್ಟೋರ್ ಮೇಲ್ವಿಚಾರಕ | 10ನೇ |
| MTS | 10ನೇ |
| ಸಹಾಯಕ, ಚಾಲಕ, ಪಿಯೂನ್, ಗಾರ್ಡ್ | 8ನೇ |
| ಎಲೆಕ್ಟ್ರಿಷಿಯನ್ | ITI / ಡಿಪ್ಲೊಮಾ |
IRIDO Recruitment ವಯಸ್ಸಿನ ಮಿತಿ
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 45 ವರ್ಷ (31-03-2026 ಅನ್ನ ಗಣನೆಗೆ ತೆಗ್ಕೊಳ್ಳಲಾಗಿದೆ)
IRIDO Recruitment ವಯೋಮಿತಿ ಸಡಿಲಿಕೆ
| ವರ್ಗ | ಸಡಿಲಿಕೆ |
| OBC | 3 ವರ್ಷ |
| SC / ST | 5 ವರ್ಷ |
IRIDO Recruitment ಸಂಬಳ
IRIDO ನೇಮಕಾತಿ ಇದು ಅಭ್ಯರ್ಥಿಗಳು ಮೊದ್ಲು ನೋಡೋ ವಿಷಯ ಇಲ್ಲಿ ಸಂಬಳ ತುಂಬಾ ಚೆನ್ನಾಗಿದೆ:
| ಪೋಸ್ಟ್ | ಮಾಸಿಕ ಸಂಬಳ |
| ಯೋಜನಾ ವ್ಯವಸ್ಥಾಪಕ | ₹1,23,100 – ₹2,15,900 |
| ಪ್ರಾದೇಶಿಕ ವ್ಯವಸ್ಥಾಪಕ | ₹78,800 – ₹2,09,200 |
| ಮಾರ್ಕೆಟಿಂಗ್ ವ್ಯವಸ್ಥಾಪಕ | ₹67,700 – ₹2,08,700 |
| ಕಾರ್ಯನಿರ್ವಾಹಕ ವ್ಯವಸ್ಥಾಪಕ | ₹56,100 – ₹1,77,500 |
| ವಿಭಾಗೀಯ ವ್ಯವಸ್ಥಾಪಕ | ₹53,100 – ₹1,67,800 |
| ಜಿಲ್ಲಾ ವ್ಯವಸ್ಥಾಪಕ | ₹47,600 – ₹1,51,100 |
| ತಹಸಿಲ್ ವ್ಯವಸ್ಥಾಪಕ | ₹44,900 – ₹1,42,400 |
| ಶಾಖಾ ವ್ಯವಸ್ಥಾಪಕ | ₹35,400 – ₹1,12,400 |
| ಸಹಾಯಕ ಶಾಖಾ ವ್ಯವಸ್ಥಾಪಕ | ₹29,200 – ₹92,300 |
| ಗುಮಾಸ್ತ, ಕಂಪ್ಯೂಟರ್ ಆಪರೇಟರ್, ಲೆಕ್ಕಾಧಿಕಾರಿ | ₹19,900 – ₹63,200 |
| ತಂಡ ನಾಯಕ, ಕ್ಷೇತ್ರ ಅಧಿಕಾರಿ, ತರಬೇತಿ ಅಧಿಕಾರಿ | ₹18,000 – ₹56,900 |
| ಅಪ್ರೆಂಟಿಸ್, ಸ್ಟೋರ್ ಮೇಲ್ವಿಚಾರಕ, ಲ್ಯಾಬ್ ಅಟೆಂಡೆಂಟ್ | ₹19,900 – ₹63,200 |
| ಸಹಾಯಕ, ಚಾಲಕ, ಪಿಯೂನ್, ಗಾರ್ಡ್, ಎಲೆಕ್ಟ್ರಿಷಿಯನ್ | ₹18,000 – ₹56,900 |
| MTS | ₹19,900 – ₹63,200 |
ನೋಡಿ — ಕನಿಷ್ಠ ₹18,000 ಮತ್ತು ಗರಿಷ್ಠ ₹2,15,900 ವರೆಗೆ ಸಿಗುತ್ತೆ . ಇದರ ಜೊತೆ DA, HRA, ಮತ್ತು ಇತರ ಭತ್ಯೆಗಳು ಬೇರೆ ಸೇರಿಕೊಳ್ಳುತ್ತವೆ
IRIDO Recruitment ಆಯ್ಕೆ ಪ್ರಕ್ರಿಯೆ
IRIDO ನೇಮಕಾತಿ ರಲ್ಲಿ ಆಯ್ಕೆ ಪ್ರಕ್ರಿಯೆ ಹೀಗಿದೆ
ಹಂತ 1 — ಅರ್ಜಿ ಸ್ಕ್ರೀನಿಂಗ್
- ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ದಾಖಲೆಗಳನ್ನ ಪರಿಶೀಲಿಸಲಾಗ್ತದೆ. ಅರ್ಹರಾದ ಅಭ್ಯರ್ಥಿಗಳನ್ನ ಮಾತ್ರ ಮುಂದಿನ ಹಂತಕ್ಕೆ ಕರ್ಕೊಳ್ಳಾಗ್ತದೆ.
ಹಂತ 2 — ಇಂಟರ್ವ್ಯೂ (ಸಂದರ್ಶನ)
ಅಧಿಕೃತ ಅಧಿಸೂಚನೆ ಪ್ರಕಾರ ಮುಖ್ಯ ಆಯ್ಕೆ ಪ್ರಕ್ರಿಯೆ ಸಂದರ್ಶನ ಮೂಲಕ ಆಗುತ್ತದೆ . ಇಲ್ಲಿ ನಿಮ್ಮ:
- ಶೈಕ್ಷಣಿಕ ಹಿನ್ನೆಲೆ
- ಕೆಲಸದ ಅನುಭವ (ಇದ್ದರೆ)
- ಸಂವಹನ ಕೌಶಲ್ಯ
- ಸಾಮಾನ್ಯ ಜ್ಞಾನ ಮತ್ತು ವ್ಯಕ್ತಿತ್ವ — ಇವನ್ನೆಲ್ಲ ನೋಡ್ತಾರೆ
ಹಂತ 3 — ದಾಖಲೆ ಪರಿಶೀಲನೆ
- ಆಯ್ಕೆ ಆದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನ ಪರಿಶೀಲಿಸ್ತಾರೆ.
ಹಂತ 4 — ವೈದ್ಯಕೀಯ ಪರೀಕ್ಷೆ
- ಕೆಲ ಪೋಸ್ಟ್‌ಗಳಿಗೆ ಮೆಡಿಕಲ್ ಫಿಟ್‌ನೆಸ್ ಟೆಸ್ಟ್ ಕೂಡ ನಡಿಯಬಹುದು.
ಹಂತ 5 — ಫೈನಲ್ ಮೆರಿಟ್ ಲಿಸ್ಟ್
- ಎಲ್ಲಾ ಹಂತಗಳಲ್ಲಿ ಆಯ್ಕೆ ಆದ ಅಭ್ಯರ್ಥಿಗಳ ಫೈನಲ್ ಲಿಸ್ಟ್ ಪ್ರಕಟಿಸುತ್ತಾರೆ .
IRIDO Recruitment ಪರೀಕ್ಷೆಯ ಮಾದರಿ
IRIDO ನೇಮಕಾತಿ ಈ ನೇಮಕಾತಿಯಲ್ಲಿ ಮುಖ್ಯ ಆಯ್ಕೆ ಪ್ರಕ್ರಿಯೆ ಸಂದರ್ಶನ ಆಧಾರಿತ ಆಗಿದ್ದರೂ, ಕೆಲ ಪೋಸ್ಟ್‌ಗಳಿಗೆ ಲಿಖಿತ ಪರೀಕ್ಷೆ ನಡೆಯಬಹುದು. ಅದಕ್ಕಾಗಿ ಈ ವಿಷಯಗಳ ತಯಾರಿ ಮಾಡಿಕೊಳ್ಳಿ
ಸಂದರ್ಶನದಲ್ಲಿ ಕೇಳೋ ಮುಖ್ಯ ವಿಷಯಗಳು
ಸಾಮಾನ್ಯ ಜ್ಞಾನ (General Knowledge):
- ಭಾರತದ ಇತಿಹಾಸ ಮತ್ತು ಭೂಗೋಳ
- ಕರ್ನಾಟಕದ ಪ್ರಮುಖ ಘಟನೆಗಳು
- ಸರ್ಕಾರದ ಯೋಜನೆಗಳು
- ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು
ಗಣಿತ (Basic Maths):
- ಸರಳ ಲೆಕ್ಕಾಚಾರ
- ಶೇಕಡಾ ಲೆಕ್ಕ
- ತರ್ಕಶಾಸ್ತ್ರ (Reasoning)
ಇಂಗ್ಲಿಷ್ / ಕನ್ನಡ:
- ಸಾಮಾನ್ಯ ವ್ಯಾಕರಣ
- ಸಂಕ್ಷಿಪ್ತ ಬರಹ
ಕಂಪ್ಯೂಟರ್ ಜ್ಞಾನ (ಕಂಪ್ಯೂಟರ್ ಪೋಸ್ಟ್‌ಗೆ):
- MS Office
- Internet ಬಳಕೆ
- ಡೇಟಾ ಎಂಟ್ರಿ
ತಾಂತ್ರಿಕ ಜ್ಞಾನ (ITI / ಡಿಪ್ಲೊಮಾ ಪೋಸ್ಟ್‌ಗೆ):
- ನಿಮ್ಮ ಟ್ರೇಡ್ ಸಂಬಂಧಿತ ಪ್ರಶ್ನೆಗಳು
ಚಾಲಕ ಪೋಸ್ಟ್‌ಗೆ ವಿಶೇಷ:
- ಡ್ರೈವಿಂಗ್ ಟೆಸ್ಟ್ ಇರಬಹುದು
- ವಾಹನ ನಿಯಮಗಳ ಜ್ಞಾನ
- ಭಾರತದ ರಸ್ತೆ ಸಂಕೇತಗಳು
IRIDO Recruitment ಸಂದರ್ಶನ ಅಂಕ ವಿಭಜನೆ (ಅಂದಾಜು)
| ವಿಷಯ | ಅಂಕಗಳು |
| ಶೈಕ್ಷಣಿಕ ಹಿನ್ನೆಲೆ | 30% |
| ಸಾಮಾನ್ಯ ಜ್ಞಾನ | 25% |
| ವ್ಯಕ್ತಿತ್ವ ಮತ್ತು ಸಂವಹನ | 25% |
| ತಾಂತ್ರಿಕ ಜ್ಞಾನ | 20% |
ಇದನ್ನು ಓದಿ:-ITBP ಸಹಾಯಕ ಕಮಾಂಡೆಂಟ್ ನೇಮಕಾತಿ 2026: 06 ಇಂಜಿನಿಯರ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ ಈಗಲೇ ಅರ್ಜಿ ಹಾಕಿ
IRIDO Recruitment ಮುಖ್ಯ ದಿನಾಂಕಗಳು
| ಅರ್ಜಿ ಪ್ರಾರಂಭ | 01 ಮೇ 2026 |
| ಅರ್ಜಿ ಸಲ್ಲಿಸಲು ಕೊನೆ ದಿನ | 31 ಮೇ 2026 |
| ಅರ್ಜಿ ಶುಲ್ಕ ಪಾವತಿ | 31 ಮೇ 2026 ರೊಳಗೆ |
| ಪ್ರವೇಶ ಪತ್ರ | ಅಧಿಸೂಚನೆ ನಂತರ |
| ಸಂದರ್ಶನ | ಶೀಘ್ರದಲ್ಲಿ ಪ್ರಕಟ |
ಅರ್ಜಿ ಸಲ್ಲಿಸುವ ವಿಧಾನ
IRIDO Recruitment ಆನ್‌ಲೈನ್‌ನಲ್ಲಿ ಅರ್ಜಿ ಹಾಕೋದು ತುಂಬಾ ಸುಲಭ. ಈ ಸ್ಟೆಪ್ಸ್ ಫಾಲೋ ಮಾಡಿ:
ಸ್ಟೆಪ್ 1 — ನೋಟಿಫಿಕೇಶನ್ ಓದಿ
- ಮೊದಲು IRIDO ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು ಅಧಿಸೂಚನೆ PDF ಡೌನ್‌ಲೋಡ್ ಮಾಡಿ. ಎಲ್ಲಾ ವಿವರಗಳನ್ನ ಸರಿಯಾಗಿ ಓದಿ.
ಸ್ಟೆಪ್ 2 — ದಾಖಲೆಗಳು ತಯಾರಿ ಮಾಡ್ಕೊಳ್ಳಿ
- ಪಾಸ್‌ಪೋರ್ಟ್ ಫೋಟೋ, ಸಿಗ್ನೇಚರ್, ಎಲ್ಲಾ ಸರ್ಟಿಫಿಕೇಟ್‌ಗಳು ಸ್ಕ್ಯಾನ್ ಮಾಡ್ಕೊಳ್ಳಿ.
ಸ್ಟೆಪ್ 3 — ರಿಜಿಸ್ಟ್ರೇಶನ್
- ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಇಮೇಲ್ ಮತ್ತು ಮೊಬೈಲ್ ನಂಬರ್ ಕೊಟ್ಟು ರಿಜಿಸ್ಟರ್ ಮಾಡ್ಕೊಳ್ಳಿ
ಸ್ಟೆಪ್ 4 — ಅರ್ಜಿ ಫಾರ್ಮ್ ಭರ್ತಿ
ಈ ವಿವರಗಳನ್ನ ಸರಿಯಾಗಿ ಭರ್ತಿ ಮಾಡಿ:
- ವೈಯಕ್ತಿಕ ವಿವರಗಳು (ಹೆಸರು, ತಂದೆ ಹೆಸರು, ಹುಟ್ಟಿದ ದಿನ)
- ಶೈಕ್ಷಣಿಕ ವಿವರಗಳು
- ಅನುಭವ (ಇದ್ದರೆ)
- ವಿಳಾಸ ಮತ್ತು ಸಂಪರ್ಕ ಮಾಹಿತಿ
- ವರ್ಗ (General / SC / ST / OBC / EWS)
ಸ್ಟೆಪ್ 5 — ದಾಖಲೆ ಅಪ್‌ಲೋಡ್
- ಪಾಸ್‌ಪೋರ್ಟ್ ಫೋಟೋ (JPEG, max 50KB)
- ಸಹಿ (JPEG, max 20KB)
- ಶೈಕ್ಷಣಿಕ ದಾಖಲೆಗಳು (PDF)
- ಜಾತಿ ಪ್ರಮಾಣಪತ್ರ (ಅಗತ್ಯ ಇದ್ದರೆ)
ಸ್ಟೆಪ್ 6 — ಶುಲ್ಕ ಪಾವತಿ
- SC/ST/OBC/EWS: ₹350/-
- ಇತರ: ₹690/-
- ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಪಾವತಿ ಮಾಡಿ.
ಸ್ಟೆಪ್ 7 — Submit ಮಾಡಿ
- ಎಲ್ಲಾ ಮಾಹಿತಿ ಒಮ್ಮೆ ಚೆಕ್ ಮಾಡ್ಕೊಂಡು sumbit ಬಟನ್ ಒತ್ತಿ.
ಸ್ಟೆಪ್ 8 — ಪ್ರಿಂಟ್ ಔಟ್
- ಅರ್ಜಿ ಸಂಖ್ಯೆ ಮತ್ತು ಅರ್ಜಿಯ ಪ್ರಿಂಟ್ ಔಟ್ ತೆಗ್ಕೊಂಡು ಸೇಫ್ ಇಡಿ.
IRIDO Recruitment ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಅರ್ಜಿ ಸಲ್ಲಿಸೋಕೆ ಈ ದಾಖಲೆಗಳನ್ನ ತಯಾರಿ ಮಾಡ್ಕೊಳ್ಳಿ:
ಅಗತ್ಯ ದಾಖಲೆಗಳ ಲಿಸ್ಟ್
- ಹತ್ತನೇ / ಎಂಟನೇ ತರಗತಿ ಮಾರ್ಕ್ಸ್ ಕಾರ್ಡ್ (ವಯಸ್ಸಿನ ಪುರಾವೆ)
- ಎಲ್ಲಾ ಶೈಕ್ಷಣಿಕ ಮಾರ್ಕ್ಸ್ ಕಾರ್ಡ್ ಮತ್ತು ಸರ್ಟಿಫಿಕೇಟ್‌ಗಳು
- ಆಧಾರ್ ಕಾರ್ಡ್
- ನಿವಾಸ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (SC/ST/OBC ಅಭ್ಯರ್ಥಿಗಳಿಗೆ)
- EWS ಪ್ರಮಾಣಪತ್ರ (ಅಗತ್ಯ ಇದ್ದರೆ)
- ಪಾಸ್‌ಪೋರ್ಟ್ ಸೈಜ್ ಫೋಟೋ (ಇತ್ತೀಚಿನದು)
- ಸಹಿ
- ಡ್ರೈವಿಂಗ್ ಲೈಸೆನ್ಸ್ (ಚಾಲಕ ಪೋಸ್ಟ್‌ಗೆ ಕಡ್ಡಾಯ)
- ಅನುಭವ ಪ್ರಮಾಣಪತ್ರ (ಇದ್ದರೆ)
- ಮೊಬೈಲ್ ನಂಬರ್ (ಆಕ್ಟಿವ್ ಆಗಿ ಇರಬೇಕು)
- ಇಮೇಲ್ ID (ಆಕ್ಟಿವ್ ಆಗಿ ಇರಬೇಕು)
Preparation Tips (ತಯಾರಿ ಟಿಪ್ಸ್)
ಇಂಟರ್ವ್ಯೂಗೆ ತಯಾರಿ ಮಾಡ್ಕೊಳ್ಳೋದು ತುಂಬಾ ಮುಖ್ಯ. ಈ ಟಿಪ್ಸ್ ಫಾಲೋ ಮಾಡಿ:
1. ಸಾಮಾನ್ಯ ಜ್ಞಾನ ಓದಿ
- ಪ್ರತಿ ದಿನ ಕನ್ನಡ ಅಥವಾ ಇಂಗ್ಲಿಷ್ ಪೇಪರ್ ಓದಿ. ಗ್ರಾಮೀಣ ಅಭಿವೃದ್ಧಿ, ಕೃಷಿ, ಕೈಗಾರಿಕೆ ಸಂಬಂಧಿತ ಸುದ್ದಿಗಳ ಮೇಲೆ ಗಮನ ಕೊಡಿ.
2. IRIDO ಬಗ್ಗೆ ತಿಳ್ಕೊಳ್ಳಿ
- ಸಂಸ್ಥೆ ಯಾವ ಕೆಲಸ ಮಾಡ್ತದೆ, ಅದರ ಉದ್ದೇಶ ಏನು, ಯಾವ ಯೋಜನೆಗಳನ್ನ ನಡೆಸ್ತದೆ — ಇದನ್ನ ಇಂಟರ್ವ್ಯೂನಲ್ಲಿ ಖಂಡಿತ ಕೇಳ್ತಾರೆ.
3. ನಿಮ್ಮ ಕ್ಷೇತ್ರದ ಜ್ಞಾನ
- ಯಾವ ಪೋಸ್ಟ್‌ಗೆ ಅರ್ಜಿ ಹಾಕ್ತೀರಾ ಅದಕ್ಕೆ ಸಂಬಂಧಿಸಿದ ವಿಷ್ಯಗಳನ್ನ ಚೆನ್ನಾಗಿ ಓದಿ.
4. Mock Interview ಮಾಡಿ
- ಮನೆಯಲ್ಲಿ ಅಥವಾ ಗೆಳೆಯರ ಜೊತೆ ಸಂದರ್ಶನ ಪ್ರಾಕ್ಟೀಸ್ ಮಾಡಿ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಮಾತಾಡೋಕ್ಕೆ ಅಭ್ಯಾಸ ಮಾಡಿ.
5. ಡ್ರೆಸ್ ಕೋಡ್
- ಇಂಟರ್ವ್ಯೂಗೆ ಫಾರ್ಮಲ್ ಬಟ್ಟೆ ಹಾಕ್ಕೊಂಡು ಬನ್ನಿ. ಮೊದಲ ಇಂಪ್ರೆಶನ್ ತುಂಬಾ ಮುಖ್ಯ.
6. ಆತ್ಮವಿಶ್ವಾಸ
- ಇಂಟರ್ವ್ಯೂ ಕೊಠಡಿಗೆ ಆತ್ಮ ವಿಶ್ವಾಸದಿಂದ ಹೋಗಿ. ಪ್ರಶ್ನೆ ಗೊತ್ತಿಲ್ಲದಿದ್ದರೆ “ಗೊತ್ತಿಲ್ಲ” ಅಂತ ಹೇಳೋದು ತಪ್ಪಲ್ಲ — ತಪ್ಪು ಉತ್ತರ ಕೊಡೋದು ತಪ್ಪು
7. ಯೂಟ್ಯೂಬ್ ಬಳಕೆ
- ಕನ್ನಡ ಯೂಟ್ಯೂಬ್ ಚಾನೆಲ್‌ಗಳಲ್ಲಿ GK, ಕರೆಂಟ್ ಅಫೇರ್ಸ್ ವೀಡಿಯೊಗಳನ್ನ ನೋಡಿ.
8. ಟೈಮ್ ಮ್ಯಾನೇಜ್‌ಮೆಂಟ್
- ಪ್ರತಿ ದಿನ ಕನಿಷ್ಠ 2-3 ಗಂಟೆ ತಯಾರಿಗೆ ಮೀಸಲಿಡಿ.
ಈ ತಪ್ಪುಗಳನ್ನು ಮಾಡಬೇಡಿ
ಅನೇಕ ಅಭ್ಯರ್ಥಿಗಳು ಈ ತಪ್ಪುಗಳನ್ನ ಮಾಡ್ತಾರೆ — ನೀವು ಮಾಡಬೇಡಿ
1: ಕೊನೆ ದಿನ ಅರ್ಜಿ ಹಾಕೋದು.
- ಕೊನೆ ದಿನ ಸರ್ವರ್ ಡೌನ್ ಆಗಬಹುದು. ಮೇ 25 ಒಳಗೇ ಅರ್ಜಿ ಹಾಕಿ.
2: ಫೋಟೋ ಮತ್ತು ಸಿಗ್ನೇಚರ್ ಸೈಜ್ ತಪ್ಪಾಗಿ ಅಪ್‌ಲೋಡ್ ಮಾಡೋದು
- ನಿಗದಿತ ಸೈಜ್ ಮತ್ತು ಫಾರ್ಮ್ಯಾಟ್‌ನಲ್ಲಿ ಮಾತ್ರ ಅಪ್‌ಲೋಡ್ ಮಾಡಿ.
3: ತಪ್ಪಾದ ಮಾಹಿತಿ ನೀಡೋದು
- ಹೆಸರು, ಹುಟ್ಟಿದ ದಿನ, ವರ್ಗ — ಇದೆಲ್ಲ ದಾಖಲೆ ಪ್ರಕಾರ ಸರಿಯಾಗಿ ಹಾಕಿ.
4: ಶುಲ್ಕ ಸರಿ ತಪ್ಪಿಸೋದು
- ನಿಮ್ಮ ವರ್ಗ ಪ್ರಕಾರ ಸರಿಯಾದ ಶುಲ್ಕ ಪಾವತಿ ಮಾಡಿ.
5: Fake ವೆಬ್‌ಸೈಟ್‌ಗೆ ಹೋಗೋದು
- ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ. Google ಸರ್ಚ್‌ನಲ್ಲಿ ಬರೋ ಎಲ್ಲಾ ವೆಬ್‌ಸೈಟ್‌ಗಳು ಅಧಿಕೃತ ಅಲ್ಲ.
6: ಅರ್ಜಿ ಸ್ಲಿಪ್ ಸೇವ್ ಮಾಡದಿರೋದು
- ಅರ್ಜಿ ಸಬ್ಮಿಟ್ ಆದ ನಂತರ ಪ್ರಿಂಟ್ ಔಟ್ ತೆಗ್ಕೊಂಡು ಇಡಿ.
7: ಏಜೆಂಟ್‌ಗೆ ಹಣ ಕೊಡೋದು
- ಆನ್‌ಲೈನ್ ಅರ್ಜಿ ಯಾರಾದ್ರೂ ಹಾಕಬಹುದು — ಏಜೆಂಟ್ ಅಗತ್ಯ ಇಲ್ಲ.
8: ಇಂಟರ್ವ್ಯೂಗೆ ತಯಾರಿ ಇಲ್ಲದೆ ಹೋಗೋದು
- ಆಯ್ಕೆ ಪ್ರಕ್ರಿಯೆ ಸಂದರ್ಶನ ಮೂಲಕ ಆಗ್ತದೆ — ತಯಾರಿ ಕಡ್ಡಾಯ.
ಆಯ್ಕೆ ಆದ ನಂತರ ಏನು ಮಾಡಬೇಕು
ಆಯ್ಕೆ ಆದ ನಂತರ ಏನಾಗ್ತದೆ ಅಂತ ತಿಳ್ಕೊಳ್ಳಿ — ಇದು ಅನೇಕ ಜನ ಕೇಳ್ತಾ ಇರ್ತಾರೆ:
ಹಂತ 1 — ಆಫರ್ ಲೆಟರ್:
- ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು ಬಂದ ನಂತರ ನಿಮಗೆ ಅಧಿಕೃತ ಅಪಾಯಿಂಟ್‌ಮೆಂಟ್ ಲೆಟರ್ ಕೊಡ್ತಾರೆ.
ಹಂತ 2 — ದಾಖಲೆ ಪರಿಶೀಲನೆ:
- ಮೂಲ ದಾಖಲೆಗಳನ್ನ ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕಾಗ್ತದೆ.
ಹಂತ 3 — ಮೆಡಿಕಲ್ ಫಿಟ್‌ನೆಸ್:
- ನಿಮ್ಮ ದೈಹಿಕ ಆರೋಗ್ಯ ಸರಿ ಇದ್ಯಾ ಅಂತ ಪರೀಕ್ಷಿಸ್ತಾರೆ.
ಹಂತ 4 — ತರಬೇತಿ (Training):
- ಹಲ ಪೋಸ್ಟ್‌ಗಳಿಗೆ ಸೇರಿದ ಮೇಲೆ ಕೆಲ ದಿನಗಳ ತರಬೇತಿ ನೀಡ್ತಾರೆ.
ಹಂತ 5 — ಜಾಯಿನಿಂಗ್:
- ನಿಗದಿತ ದಿನದಂದು ಕರ್ತವ್ಯಕ್ಕೆ ಹಾಜರಾಗಬೇಕು.
ಕೆಲಸಕ್ಕೆ ಸೇರಿದ ನಂತರ ಸಿಗೋ ಸೌಲಭ್ಯಗಳು:
- ಮಾಸಿಕ ನಿಗದಿತ ಸಂಬಳ
- DA (Dearness Allowance) — ತುಟ್ಟಿ ಭತ್ಯೆ
- HRA (House Rent Allowance) — ಮನೆ ಬಾಡಿಗೆ ಭತ್ಯೆ
- ವೈದ್ಯಕೀಯ ಸೌಲಭ್ಯ
- PF (Provident Fund) — ಭವಿಷ್ಯ ನಿಧಿ
- ವಾರ್ಷಿಕ ರಜೆ ಮತ್ತು ಇತರ ಸೌಕರ್ಯಗಳು
- ಬಡ್ತಿ ಮತ್ತು ಬೆಳವಣಿಗೆ ಅವಕಾಶ
IRIDO Recruitment ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1: IRIDO ಅಂದ್ರೆ ಏನು?
- IRIDO ಅಂದ್ರೆ Indian Rural Industrial Development Organisation — ಅಂದ್ರೆ ಭಾರತೀಯ ಗ್ರಾಮೀಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ. ಗ್ರಾಮೀಣ ಪ್ರದೇಶದ ಕೈಗಾರಿಕೆ ಮತ್ತು ಉದ್ಯೋಗ ಅಭಿವೃದ್ಧಿಗೆ ಈ ಸಂಸ್ಥೆ ಕೆಲಸ ಮಾಡ್ತದೆ.
2: ಒಟ್ಟು ಎಷ್ಟು ಹುದ್ದೆಗಳಿವೆ?
- ಒಟ್ಟು 6300 ಹುದ್ದೆಗಳಿವೆ — ಚಾಲಕ, MTS ಸೇರಿ 24 ಬೇರೆ ಬೇರೆ ಪೋಸ್ಟ್‌ಗಳು.
3: ಕನಿಷ್ಠ ಶಿಕ್ಷಣ ಅರ್ಹತೆ ಎಷ್ಟು?
- ಕನಿಷ್ಠ 8ನೇ ತರಗತಿ. ಆದ್ರೆ ಪೋಸ್ಟ್ ಪ್ರಕಾರ ಅರ್ಹತೆ ಬೇರೆ ಬೇರೆ ಇದೆ.
4: ವಯಸ್ಸಿನ ಮಿತಿ ಎಷ್ಟು?
- 18 ರಿಂದ 45 ವರ್ಷ. OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದೆ.
5: ಅರ್ಜಿ ಶುಲ್ಕ ಎಷ್ಟು?
- SC/ST/OBC/EWS ಅಭ್ಯರ್ಥಿಗಳಿಗೆ ₹350, ಇತರರಿಗೆ ₹690.
6: ಕೊನೆ ದಿನ ಯಾವುದು ?
- 31 ಮೇ 2026. ಆದ್ರೆ ಮೇ 25ರ ಒಳಗೇ ಅರ್ಜಿ ಹಾಕೋದು ಒಳ್ಳೇದು.
7: ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ?
- ಮುಖ್ಯ ಆಯ್ಕೆ ಸಂದರ್ಶನ ಮೂಲಕ ಆಗುತ್ತದೆ . ಅದಕ್ಕೂ ಮೊದಲು ಅರ್ಜಿ ಸ್ಕ್ರೀನಿಂಗ್ ಮತ್ತು ದಾಖಲೆ ಪರಿಶೀಲನೆ ಆಗ್ತದೆ.
8: ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಬಹುದಾ?
- ಖಂಡಿತ! ಇದು ಅಖಿಲ ಭಾರತ ಮಟ್ಟದ ನೇಮಕಾತಿ. ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
9: ಚಾಲಕ ಪೋಸ್ಟ್‌ಗೆ ಏನು ಬೇಕು?
- ಕನಿಷ್ಠ 8ನೇ ತರಗತಿ ಮತ್ತು ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಅನುಭವ ಇದ್ದರೆ ಮತ್ತು ಅನುಕೂಲ.
10: ಅರ್ಜಿ ಆನ್‌ಲೈನ್‌ನಲ್ಲಿ ಹಾಕೋಕ್ಕೆ ಆಗುತ್ತದೆಯಾ ?
- ಹೌದು! ಅರ್ಜಿ ಸಂಪೂರ್ಣ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಆಫ್‌ಲೈನ್ ಅರ್ಜಿ ಸ್ವೀಕರಿಸಲಾಗುವುದಿಲ್ಲ .
Conclusion
ಸ್ನೇಹಿತರೇ, IRIDO ನೇಮಕಾತಿ 2026 ಒಂದು ಅದ್ಭುತ ಅವಕಾಶ. 6300 ಖಾಲಿ ಹುದ್ದೆಗಳು ಮತ್ತು 8ನೇ ತರಗತಿಯಿಂದ ಪೋಸ್ಟ್ ಗ್ರಾಜುಯೇಟ್ ವರೆಗೆ ಅರ್ಜಿ ಹಾಕೋ ಅವಕಾಶ ಇದೆ.
ಸಂಬಳ ಒಳ್ಳೇದು, ಸರ್ಕಾರಿ ಮಾನದಂಡದ ಸೌಲಭ್ಯಗಳು ಸಿಗ್ತಾವೆ ಮತ್ತು ಗ್ರಾಮೀಣ ಭಾರತದ ಅಭಿವೃದ್ಧಿಗೆ ಕೆಲಸ ಮಾಡೋ ಸಂತೃಪ್ತಿ ಬೇರೇನೇ.
ಮೂರು ಮುಖ್ಯ ಕೆಲಸ ಈಗಲೇ ಮಾಡಿ:
- ಅಧಿಕೃತ ಅಧಿಸೂಚನೆ ಡೌನ್‌ಲೋಡ್ ಮಾಡಿ ಮತ್ತು ಓದಿ
- ದಾಖಲೆಗಳನ್ನ ರೆಡಿ ಮಾಡ್ಕೊಳ್ಳಿ
- 31 ಮೇ 2026 ಕೊನೆ ದಿನ — ಮೇ 25ರ ಮೊದಲೇ ಅರ್ಜಿ ಹಾಕಿ
ನಿಮ್ಮ ಕನಸಿನ ಸರ್ಕಾರಿ ಕೆಲಸ ಸಿಗಲಿ ಅಂತ ಶುಭ ಹಾರೈಕೆಗಳು
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
|---|---|
| ವಾಟ್ಸಾಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
Aseef MB
Content Creator – Janasevainfo.com
Aseef MB ಅವರು Govt jobs, schemes ಮತ್ತು education updates ಕ್ಷೇತ್ರದಲ್ಲಿ content ಬರೆಯುತ್ತಿದ್ದಾರೆ. ಸರಳ ಭಾಷೆಯಲ್ಲಿ ಉಪಯುಕ್ತ ಮಾಹಿತಿಯನ್ನು ನೀಡುವುದು ಇವರ ಮುಖ್ಯ ಗುರಿಯಾಗಿದೆ.
Janasevainfo.com ಒಂದು ಮಾಹಿತಿ ಪ್ರಧಾನ ವೆಬ್ಸೈಟ್ ಮಾತ್ರ. ನಾವು ಯಾವುದೇ ಸರ್ಕಾರಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಅಲ್ಲ.
ಎಲ್ಲಾ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ಗಳಿಂದ ಪರಿಶೀಲಿಸಿ ಬಳಸುವುದು ಉತ್ತಮ.
ನಾವು ನಮ್ಮ ಬಳಕೆದಾರರಿಗೆ quality content + accurate information ನೀಡಲು ಬದ್ಧರಾಗಿದ್ದೇವೆ.
ನಿಮ್ಮ ವಿಶ್ವಾಸವೇ ನಮ್ಮ ಶಕ್ತಿ
Contact Us
ಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳಿದ್ದರೆ, ನಮ್ಮನ್ನು ಸಂಪರ್ಕಿಸಬಹುದು:
Email: janasevainfo202@gmail.com
I want work
okay check our website sir then apply
check our website